ರಕ್ತ ಲಿಪಿಯ ಚಿರಂಜೀವಿ - 66

  • 2.5k
  • 1k

'ಮಹಾ ಸಮತೋಲನ'ವನ್ನು ಸಾಧಿಸಿದ ನಂತರ, ಆದರ್ಶ್ ಮತ್ತು ರಶ್ಮಿ ಈಗ ಪ್ರವೇಶಿಸುತ್ತಿರುವುದು ಅತೀಂದ್ರಿಯ ಪಯಣದ ಅತಿ ಭೀಕರ ಮತ್ತು ಅದ್ಭುತವಾದ ಹಂತ ಶೂನ್ಯದ ಅನುಭವ ಏಳನೇ ಕಲೆ.ಇದು ಕೇವಲ ಒಂದು ದ್ವಾರವಲ್ಲ, ಇದು ಅಸ್ತಿತ್ವದ ಕಡೆಯ ಅಂಚು. ಇಲ್ಲಿನ ಅನುಭವವು ಮನುಷ್ಯನಿಗೆ ಸಾವು ಮತ್ತು ಬದುಕಿನ ನಡುವಿನ ರೇಖೆಯನ್ನು ಅಳಿಸಿಹಾಕುತ್ತದೆ. ಸಮತೋಲನವನ್ನು ಸಾಧಿಸಿದ ಆದರ್ಶ್ ಮತ್ತು ರಶ್ಮಿಯ ಎದುರು ಈಗ ಯಾವುದೇ ದಾರಿಗಳಿಲ್ಲ. ಅವರು ನಿಂತಿದ್ದು 'ಶೂನ್ಯದ ತುದಿಯಲ್ಲಿ. ಇದು ಕತ್ತಲೆಯಲ್ಲ, ಇದು ಬೆಳಕಲ್ಲ. ಇಲ್ಲಿ ಪ್ರಕೃತಿಯ ಯಾವುದೇ ನಿಯಮಗಳು ಕೆಲಸ ಮಾಡುವುದಿಲ್ಲ. ಇದು ಸೃಷ್ಟಿಕರ್ತನೂ ವಿಶ್ರಮಿಸುವ ತಾಣ. ಇಲ್ಲಿ ಬ್ರಹ್ಮಾಂಡದ ಅಂತಿಮ ಸತ್ಯವನ್ನು ಅರಿತುಕೊಳ್ಳಲು, ಮೊದಲು ತನ್ನ ಅಸ್ತಿತ್ವವನ್ನೇ ಸಂಪೂರ್ಣವಾಗಿ 'ಖಾಲಿ' ಮಾಡಿಕೊಳ್ಳಬೇಕು.ಆದರ್ಶ್, ನಮ್ಮ ಸುತ್ತಲೂ ಏನೂ ಇಲ್ಲ, ನಾನು ನನ್ನನ್ನೇ ನೋಡಿಕೊಳ್ಳುತ್ತಿದ್ದೇನೆ, ಆದರೆ ನಾನು ಕಾಣುತ್ತಿಲ್ಲ. ಇದುವೇ ಶೂನ್ಯವೇ? ಇಲ್ಲಿ ಏನೂ ಇಲ್ಲದಿದ್ದರೂ, ಯಾವುದೋ ಒಂದು ಮಹಾ ಶಕ್ತಿ ನಮ್ಮನ್ನು ಹಿಡಿದಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ ರಶ್ಮಿ ಆ ಶೂನ್ಯದಲ್ಲಿ ತೇಲುತ್ತಾ, ಭಯ